Sunday, September 12, 2010

ಕ್ಷಮಿಸು ಅಂಥ ಕಾಲು ಹಿಡಿಯುವ ಕ್ಷಣದ ಮಾತಿನ ಒಂದು ಚರ್ಚೆ...

ಕಾಲು ಹಿಡಿತೇನೆ, ಪ್ಲೀಸ್ ನನ್ನ ಕ್ಷಮಿಸು ಅಂತ ಕೇಳುವುದು ಹಾಗೂ ಕಾಲು ಹಿಡಿದೇ ಬಿಡುವುದು. ಈ ಎರಡರ ವ್ಯತ್ಯಾಸಗಳೇನು ಎನ್ನುವ ಬಗ್ಗೆ ನನ್ನ ಸ್ನೇಹಿತ ಹಾಗೂ ನಾನು ಇತ್ತಿಚೆಗೆ ಬಾರಿ ಚರ್ಚೆಯನ್ನೇ ನಡೆಸಿದೆವು.
ಅವನು ಪ್ರೀತಿಸುವವಳ ಜೊತೆ ಏನೋ ತಪ್ಪಾಗಿ ನಡೆದುಕೊಂಡುಬಿಟ್ಟಿದ್ದನಂತೆ. ಅದಕ್ಕಾಗಿ ಅವಳು ನೀನು ಇಂಥವನು ಅಂತ ಗೊತ್ತಿರಲಿಲ್ಲ, ನಿನಗೂ ನಿನ್ನ ಪ್ರೀತಿಗೂ ಗುಡ್ ಬೈ, ಇನ್ನೂ ನಾನು ನಿನ್ನ ಲವ್ವರ್ ಅಲ್ಲ ಒಂದೇ ಕ್ಷಣದಲ್ಲಿ ಎಲ್ಲವನ್ನು ಬಿಸಾಡಿದಳು.ಇವನಿಗೆ ಏನು ತೋಚದಂತಾಗಿ ಇಲ್ಲ ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಕ್ಷಮಿಸು ಎಂದು ಗೋಗರೆದಿದ್ದಾನೆ. ಆದರೂ ಪ್ರಯೋಜನವಾಗಿಲ್ಲ.ನಂತರ ನಿನ್ನ ಕಾಲು ಹಿಡಿತೇನೆ ನನ್ನ ಕ್ಷಮಿಸು ಎಂದಿದ್ದಾನೆ. ಹೀಗೆ ಏನೇನೊ ಮಾತುಕತೆಯಾಗಿ ಕೊನೆಗೆ ಕ್ಷಮಿಸಿದ್ದಾಳೆ. ಅವರ ಪ್ರೀತಿ ಮತ್ತೊಮ್ಮೆ ಅಮರವಾಗಿದೆ.
ಆನಂತರ ಅವನು ನನ್ನ ಬಳಿ ಬಂದ. ನಡೆದದ್ದೆಲ್ಲವನ್ನು ಹೇಳಿದ, ನಾನು ಕೇಳಿಸಿಕೊಂಡೆ. ಆದರೆ ನಿನ್ನ ಲವ್ವರ್ ಜೊತೆ ನೀನು ಕಾಲು ಹಿಡಿಯುವ ಮಾತು ಆಡಬಾರದಿತ್ತು. ನೀವಿಬ್ಬರು ಪರಸ್ಪರ ಅರ್ಥ ಮಾಡಿಕೊಂಡಿರಬೇಕು ಆದರೆ ಪ್ರೀತಿಯ ಮದ್ಯದಲ್ಲಿ ಇಂಥಹ ಕ್ಷಮೆಗಳು ಮತ್ತು ಕಾಲು ಹಿಡಿಯುವ ಪ್ರಸಂಗಗಳು ಬರಬಾರದಿತ್ತು ಎಂದೆ. ಅವನು ಬಹಳ ನೊಂದುಕೊಂಡ.
ಇಲ್ಲ ನಾನು ಯೋಚಿಸದೇ ಮಾತಾಡಿ ಅವಳಿಗೆ ತುಂಬ ನೋವುಇ ಕೊಟ್ಟಿದ್ದೆ. ಅವಳ ಜಾಗದಲ್ಲಿ ನಿಂತು ನಾನು ಯೋಚನೆ ಮಾಡಿದಾಗ ನಾನು ಮಾಡಿದ್ದು ತಪ್ಪು ಅಂತ ಗೊತ್ತಾಯಿತು. ಈ ಸಂದರ್ಭದಲ್ಲಿ ನಾನು ನನ್ನ ಮನದರಸಿಯ ಕಾಲು ಹಿಡಿಯುತ್ತೇನೆ ಅಂದರೆ ತಪ್ಪೇನು ಅನ್ನಿಸಿತು. ಆದರೆ ಹಿಡಿಯಲಿಲ್ಲ ಹಾಗೇ ಹೇಳಿದೆ ಅಷ್ಟೆ ಅಂದ. ಮನದರಸಿ ಹೌದು. ನೀನು ಹೇಳುವುದೆಲ್ಲ ಸರಿಯಿದೆ ಆದರೆ ಕಾಲು ಹಿಡಿಯುತ್ತೇನೆ ಎಂದು ಹೇಳುವುದು ಹಾಗೂ ಹಿಡಿಯುವುದೆ ಇವೆರಡರ ನಡುವಿನ ವ್ಯತ್ಯಾಸವೇನು ಎಂದು ಕೇಳಿದೆ.ಅವಳು ನನ್ನ ಬಗ್ಗೆ ಅಷ್ಟು ಬೇಸರಾವಾಗಿದ್ದಾಗ ಇದೊಂದು ಮಾತಿನಿಂದ ಬದಲಾಗುತ್ತಾಳೆ. ನನ್ನವನು ನನ್ನ ಕಾಲು ಹಿಡಿಯುವ ಸ್ಥಿತಿ ಬರಬಾರದು ಎಂದು ಅವಳು ಕ್ಷಮಿಸುತ್ತಾಳೆ ಆಗ ನಮ್ಮಿಬ್ಬರ ಮನಸ್ಥಿತಿ ಸರಿಯಾಗುತ್ತೆ ಅಂತ ಅವನದೇ ಲಾಜಿಕ್ ಗಳನ್ನು ಹೇಳಿದ. ಅವನ ಪ್ರೀತಿಯ ವಿಚಾರದಲ್ಲಿ ಇದು ಸರಿ. ಯಾಕೆಂದರೆ ಇಲ್ಲಿ ಭಾವನೆಗಳೆ ಆಟವಾಡುವುದು. ಆದರೆ ಹೇಳುವುದು ಮಾಡುವುದು ಈಓ ಎರಡು ಕೆಲಸಗಳು ಕೆಲವು ಶಬ್ದ ಬಳಕೆಗಳಲ್ಲಿ ವ್ಯತ್ಯಾಸವಾಗುವುದು ನನಗೆ ಕುತೂಹಲಕಾರಿಯಾದ ವಷಯವಾಯಿತು.
ಬಾರಿ ಘನತೆಯೊಂದಿಗೆ ಬಾಳಿದ ವ್ಯಕ್ತಿಯೊಬ್ಬ ಅಥವಾ ಸ್ವಾಭಿಮಾನಿಯಾಗಿದ್ದ ವ್ಯಕ್ತಿಯೊಬ್ಬ ಹೀಗೆ ಹೇಳಿದ ಮೇಲೆ ಅವನು ಕಾಲು ಹಿಡಿದರೂ ಹೇಳಿದರೂ ಒಂದೇ. ಅವನು ತನ್ನ ಮನಸ್ಸಿನಲ್ಲಿ ತಾನಾಗೇ ಬಾವಿಸುತ್ತಾನೆ. ಛೇ ನಾನು ಇಂಥಹ ತಪ್ಪುಮಾಡಿದೆ ಅಥವಾ ನಾನು ಕಾಳು ಹಿಡಿಯುವ ಕೆಲಸ ಮಾಡಿದೆ ಎಂದು ಪ್ರತಿ ಕ್ಷಣ ತನ್ನನ್ನು ತಾನು ಶಪಿಸಿಕೊಳ್ಳುತ್ತಾನೆ. ಈಗ ನೀನು ಸ್ವಾಭೀಮಾನಿಯಾಗಿದ್ದರೆ ನೀನು ಅವಳ ಕಾಲು ಹಿಡಿದಂತೆಯೆ ಎಂದು ಭಾವಿಸು ಅಂತ ನಾನು ಹೇಳಿದೆ. ಅವನು ಮೌನವಾದ ನಂತರ ಹೌದು ನಾನು ಕಾಲು ಹಿಡಿದೆ ಎಂದ. ಏನೇ ಆಗಲಿ ಪ್ರೇಮಿಗಳ ವಿಷಯವನ್ನಿಟ್ಟುಕೊಂಡು ನನ್ನ ವ್ಲಾಗಿನಲ್ಲಿ ಚರ್ಚೆ ಮಾಡಿದರೆ ಅವನ ಪ್ರೀತಿಯ ಹುಡುಗಿಗೂ ನನ್ನ ಮೇಲೆ ಕೋಪ ಬಂದು ಕಾಲು ಹಿಡಿ ಎಂದರೆ ಕಷ್ಟ. ಆ ಹುಡುಗಿಗೂ ಈ ಹುಡುಗನಿಗೂ ಒಳ್ಳೆದಾಗಲಿ ಎಂದು ಕನಸಿನ ಕೋಟೆಯಲ್ಲಿ ಹಾರೈತ್ತೇನೆ.

No comments:

Post a Comment