Wednesday, September 8, 2010

ಈ ಹುಡುಗಿಯ ಲೇಖನಿಯ ಪ್ರಯತ್ನವನ್ನು ಮೆಚ್ಚಲೇಬೇಕು

ಲೇಖನಿ, ಇದು ಖಡ್ಗವಲ್ಲ.
ಇದು ಲೇಖನಿ ಕೈ ಬರಹದ ಒಂದು ಪುಟ್ಟ ಪತ್ರಿಕೆ. ಮೂಡಬಿದರೆ ಬಳಿಯ ನೆಲ್ಲಿಜೆಯ ನವ್ಯಜ್ಯೋತಿ ಎಂಬ ಹುಡುಗಿಯೊಬ್ಬಳು ಮಾಡುತ್ತಿರುವ ಈ ಪ್ರಯತ್ನಕ್ಕೆ ಭೇಷ್ ಎನ್ನಲೇಬೇಕು. ಪ್ರಬುದ್ಧವಾದ ಬರಹಗಳನ್ನೇನು ಹೊತ್ತು ತರದ ಆದರೆ ಬರೆಯಬೇಕೆಂಬ ಹಂಬಲದಲ್ಲಿ ಮೂಡಿ ಬರುತ್ತಿರುವ ಪತ್ರಿಕೆ.
ಕೈ ಬರಹದಲ್ಲಿ ಹಾಗೂ ಅಂಧವಾದ ಬರಹದ ಪತ್ರಿಕೆ ಲೇಖನಿ ನವ್ಯಾಳ ಆಸಕ್ತಯನ್ನು ತೋರಿಸುತ್ತದೆ. ಇಂದು ಸರ್ಕಾರ ಕೊಡುವ ಜಾಹಿರಾತುಗಳನ್ನೆ ನಂಬಿಕೊಂಡು ಅಥವಾ ಸರ್ಕಾರದ ಜಾಹೀರಾತುಗಳಿಗಾಗಿಯೇ ಮುದ್ರಿಸುವ ಸಣ್ಣ ಪತ್ರಿಕೆಗಳನ್ನು ನೋಡಿದ್ದೇನೆ. ಸರಕಾರ ಜಾಹೀರಾತು ನೀಡುವ ದಿನ ಪತ್ರಿಕೆಯನ್ನು ಮುದ್ರಿಸಿ ಜಾಹೀರಾತಿನ ಹಣ ಹೊಡೆಯುವ ಈ ಕಾಲಘಟ್ಟದಲ್ಲಿ. ಪತ್ರಿಕೆಗಳು ಹಣಕ್ಕಾಗಿ ತಮ್ಮನ್ನು ತಾವು ಮಾರಿಕೊಳ್ಳುತ್ತಿರುವ ಸಂದರ್ಭದಲ್ಲಿ ಲೇಖನಿ ವಿಶಿಷ್ಠವಾಗಿ ಕಾಣುತ್ತದೆ.
ಕಾಲೇಜಿನಲ್ಲಿ ಮಾದ್ಯಮ ಇತ್ತು. ಆದರೆ ಸೌಲಭ್ಯಗಳ ಕೊರತೆಯಿಂದಾಗಿ ಅದು ಸರಿಯಾದ ಸಮಯಕ್ಕೆ ಅದು ಮುದ್ರಣವಾಗುತ್ತಿರಲಿಲ್ಲ. ಇದೇ ಕಾರಣದಿಂದ ನಾನು ಲೇಖನಿಯನ್ನು ಕೈಬರಹದಲ್ಲಿ ಮಾಡಿ ಸರಿಯಾದ ಸಮಯಕ್ಕೆ ತರಬೇಕೆಂದು ಯೋಚಿಸುತ್ತದ್ದೆ. ಅದೇ ಸಮಯಕ್ಕೆ ಮೌಲ್ಯ ಮೇಡಮ್ ಕೈ ಬರಹದ ಪತ್ರಿಕೆಯೊಂದನ್ನು ತೋರಿಸಿ ನೀವು ಯಾಕೆ ಮಾಡಬಾರದು ಎಂಬ ಪ್ರಶ್ನೆಯನ್ನಿಟ್ಟಿದ್ದರು. ಇದೇ ನನಗೇ ಸ್ಪೂರ್ತಿಯಾಯಿತು.ಪತ್ರಿಕೆಯನ್ನು ಮುಂದೆಯು ಮಾಡುವಾಸೆ ಇದೆ. ಆದರೆ ಆರ್ಥಿಕವಾಗಿ ಸಹಕಾರ ಬೇಕು ಎನ್ನುತ್ತಾಳೆ ನವ್ಯಾ. ಈಗ ಪ್ರತಿ ಸಂಚಿಕೆಗೆ 500 ಕ್ಕಿಂತ ಹೆಚ್ಚು ಹಣ ಖರ್ಚಾಗುತ್ತಿದೆ.
ಸಾಕಷ್ಟು ಹೆಸರು ಮಾಡಿದ ದೊಡ್ಡ ಬರಹಗಾರರು ಕೂಡಾ ಇಂದು ದುಡ್ಡಿನ ದಾಸರಾಗಿದ್ದಾರೆ. ಯಾರು ಕೂಡಾ ಪತ್ರಿಕಾ ಧರ್ಮದ ಬಗ್ಗೆ ಮಾತನಾಡುವುದಿಲ್ಲ. ಬರಹದಲ್ಲಿ ಪತ್ರಿಕಾ ಧರ್ಮ ಪಾಲಿಸಿ ಅದಕ್ಕಾಗಿ ಮಣ್ಣಾದವರ ಬಗ್ಗೆ ಕಂತು ಕಂತು ಬರೆದು ಹಣ ಮಾಡಿಕೊಳ್ಳುತ್ತಾರೆಯೆ ಹೊರತು ಯಾರಿಗೂ ಆ ಬಗ್ಗೆ ಚಿಂತೆಯಿಲ್ಲ.
ಒಟ್ಟಾರೆ ಪತ್ರಿಕೋದ್ಯಮ ಹಳ್ಳ ಹಿಡಿಯುತ್ತಿರುವ ಸಂದರ್ಭದಲ್ಲಿ ನವ್ಯಾಳ ಆಸಕ್ತಿ ಹಾಗೂ ಪ್ರಯತ್ನ ಕನಸಿನ ಕೋಟೆಯದೊಂದು ಸಲಾಮ್.
ಲೇಖನಿಯ ಇ-ಮೇಲ್ ವಿಳಾಸ: lekhaniweekly@gmail.com